ಮಾರ್ಚ್ ೭ - ಮಾರ್ಚ್ ತಿಂಗಳ ಏಳನೆಯ ದಿನ, ವರ್ಷದ ೬೬ನೇಯ (ಅಧಿಕ ವರ್ಷದಲ್ಲಿ ೬೭ನೇಯ) ದಿನ. ಟೆಂಪ್ಲೇಟು:ಮಾರ್ಚ್ ೨೦೨೪ == ಘಟನೆಗಳು == ೧೮೭೬ - ಅಲೆಕ್ಝಾಂಡರ್ ಗ್ರಹಾಮ್ ಬೆಲ್ ಗೆ ಟೆಲಿಫೋನ್ ಅವಿಷ್ಕಾರಕ್ಕೆ ಪೇಟೆಂಟ್ ಪ್ರಾಪ್ತಿ. ೧೯೬೮ - ಬಿ.ಬಿ.ಸಿಯಿಂದ ಪ್ರಥಮ ಬಾರಿಗೆ ಬಣ್ಣದಲ್ಲಿ ದೂರದರ್ಶನದ ಮೂಲಕ ಸುದ್ದಿ ಪ್ರಸಾರ. ೧೯೬೯ - ಗೋಲ್ಡಾ ಮೇಯರ್ ಇಸ್ರೇಲ್ ದೇಶದ ಪ್ರಥಮ ಮಹಿಳಾ ಪ್ರಧಾನಿಯಾಗಿ ಆಯ್ಕೆ. ೧೯೭೧ - ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ರಿಂದ ಪೂರ್ವ ಪಾಕಿಸ್ತಾನದ ಜನತೆಗೆ ಸ್ವಾತಂತ್ರಕ್ಕಾಗಿ ಕರೆ ನೀಡಿದ ಭಾಷಣ. ಇದು ಬಾಂಗ್ಲಾದೇಶದ ಉದಯಕ್ಕೆ ನಾಂದಿಯಾಯಿತು. ೧೯೯೬ - ಜನರಿಂದ ಚುನಾಯಿತರಾದ ಪ್ರಥಮ ಪ್ಯಾಲೆಸ್ಟೈನ್ ಸಂಸತ್ ಆಸ್ತಿತ್ವಕ್ಕೆ. == ಜನನ == ೧೮೪೯ - ಲೂಥರ್ ಬರ್ಬ್ಯಾಂಕ್ - ಅಮೇರಿಕದ ಸಸ್ಯಶಾಸ್ತ್ರಜ್ಞ (ನಿ. ೧೯೨೬) ೧೯೪೯ - ಗುಲಾಮ್ ನಬಿ ಆಜಾದ್ - ಭಾರತೀಯ ರಾಜಕಾರಣಿ ೧೯೫೨ - ವಿವಿಯನ್ ರಿಚರ್ಡ್ಸ್ - ವೆಸ್ಟ್ ಇಂಡೀಜ್ ಕ್ರಿಕೆಟ್ ತಂಡದ ನಾಯಕ ಮತ್ತು ಬ್ಯಾಟ್ಸಮನ್ ೧೯೫೫ - ಅನುಪಮ್ ಖೇರ್ - ಹಿಂದಿ ಚಲನಚಿತ್ರ ನಟ ೧೯೬೦ - ಇವಾನ್ ಲೆಂಡ್ಲ್ - ಝೆಕ್ ಲಾನ್ ಟೆನ್ನಿಸ್ ಆಟಗಾರ. == ನಿಧನ == ೧೯೫೨ - ಪರಮಹಂಸ ಯೋಗಾನಂದ - ಭಾರತೀಯ ಸನ್ಯಾಸಿ ಮತ್ತು ಯೋಗ ಗುರು (ಜ. ೧೮೯೩) == ಬಾಹ್ಯ ಸಂಪರ್ಕ == ಬಿಬಿಸಿ: ಈ ದಿನ ಟೆಂಪ್ಲೇಟು:ನ್ಯೂಯಾರ್ಕ್ ಟೈಮ್ಸ್: ಈ ದಿನ ಕೆನಡಾದಲ್ಲಿ ಈ ದಿನ